ಅತಿಮಧುರ ಒಂದು ಔಷಧೀಯ ಸಸ್ಯ. ಇದರ ಸಸ್ಯನಾಮ ಗ್ಲೈಸಿರೈಸಿಕ್ ಗ್ಲಾಬ್ರ (glycyrrhiza-glabra). ಜೇಷ್ಠಮಧು, ಯಷ್ಠಿಮಧುಕ ಎಂದು ಕರೆಯಲ್ಪಟ್ಟಿದೆ. ಇದಕ್ಕೆ ಮಧುರ ಕಪ್ಪು ಮತ್ತು ಗಂಟಲು ಕೆಟ್ಟಾಗ ಸಿಹಿಯುಕ್ತ ಮತ್ತು ತಂಪುಕಾರಕ ಗುಣಬರಲು ಅದರಲ್ಲಿರುವ ಗ್ಲೈಸಿರೈಸಿನ್ ಕಾರಣ. ಇದರ ಮೂಲ ಸ್ಥಾನ ಯುರೇಶ್ಯ. ಇದನ್ನು ಮುಖ್ಯವಾಗಿ ಸ್ಪೈನ್, ಇಟಲಿ, ಫ್ರಾನ್ಸ್, ರಷ್ಯಾ, ಸಿರಿಯಾ, ಇರಾನ್, ಇರಾಕ್, ಟರ್ಕಿ, ಉತ್ತರ ಆಫ್ರಿಕಾ ಮತ್ತು ಚೈನಾ ದೇಶಗಳಲ್ಲಿ ಬೆಳೆಯಲಾಗುತ್ತದೆ. ಭಾರತಕ್ಕೆ ಇದನ್ನು ಇರಾಕ್, ಪರ್ಶಿಯಾ ಮತ್ತು ಏಷಿಯಾದ ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಶೀತಕರವಾದ ಹವಾಗುಣವಿರುವ ಹಿಮಾಲಯ ಮತ್ತು ದಕ್ಷಿಣ ಭಾರತದ ಬೆಟ್ಟ ಪ್ರದೇಶಗಳಲ್ಲಿ ಶ್ರೀನಗರ, ಕಾಶ್ಮೀರ, ಉತ್ತರಾಖಂಡ, ಗುಜರಾತ್ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ.[೨]
ಸುಮಾರು ೬ ಅಡಿ ಎತ್ತರ ಬೆಳೆಯುವ ಗಡುತರ ಪೊದರು. ಹೂಗಳು ಸುವಾಸನೆ ಹೊಂದಿದ್ದು, ವನಸ್ಪತಿ ಬಣ್ಣ ಅಥವಾ ನೇರಳೆ ಬಣ್ಣವನ್ನು ಹೊಂದಿರುತ್ತವೆ. ಇದರ ಕಾಂಡವು ಅಡ್ಡಲಾಗಿ ಭೂಮಿಯಲ್ಲಿ ಬೆಳೆಯುತ್ತದೆ. ಇದನ್ನು ವಾಣಿಜ್ಯ ಪ್ರಾಮುಖ್ಯತೆ ಹೊಂದಿದ ಲಿಕ್ಕೋರೈಸ್ ಎನ್ನುತ್ತಾರೆ. ಇದು ಸ್ವಕೀಯ ಪರಾಗ ಸ್ಪರ್ಶವನ್ನು ಹೊಂದಿದೆ. ಇದರ ವರ್ನ ತಂತುಗಳ ಸಂಖ್ಯೆ ೨n=೧೬. ಇದರ ಬೇರುಗಳು ಹೆಚ್ಚು ಕೊಂಬೆಯೊಡೆದು ಭೂಮಿಯ ಮೇಲ್ಪದರದಲ್ಲೇ ಕೇಂದ್ರೀಕೃತವಾಗಿರುತ್ತವೆ. ತಾಯಿಬೇರು ಹಲವಾರು ಗೆಡ್ಡೆಗಳನ್ನು ಹೊಂದಿರುತ್ತವೆ. [೩]
ಮಣ್ಣು: ಚೆನ್ನಾಗಿ ಬಿಸಿಲಿರುವ ಒಣ ಪ್ರದೇಶಗಳಲ್ಲಿ, ಆಳವಾದ ತೇವಯುಕ್ತ ಮಣ್ಣಿನಲ್ಲಿ(ನದಿ ದಡಗಳಲ್ಲಿ) ಚೆನ್ನಾಗಿ ಬೆಳೆಯುತ್ತದೆ. ಕ್ಷಾರಯುಕ್ತ ಮಣ್ಣಿನಲ್ಲಿಯೂ ಬೆಳೆಸಬಹುದಾಗಿದೆ.
ಇದನ್ನು ಅಂಗಾಂಶ ಕೃಷಿ ವಿಧಾನದಲ್ಲಿ ಅಭಿವೃದ್ಧಿ ಮಾಡಬಹುದು. ಈ ಬೆಳೆಯನ್ನು ಬೀಜದಿಂದ ಅಥವಾ ಮುಕುಟದಿಂದ ಅಥವಾ ಬೇರು ಬಿಟ್ಟ ಕಾಂಡದ ತುಂಡುಗಳಿಂದ ವೃದ್ಧಿ ಮಾಡಲಾಗುತ್ತದೆ.
ಇದು ಬಹುವಾರ್ಷಿಕ ಬೆಳೆಯಾದ್ದರಿಂದ ಭೂಮಿಯನ್ನು ಚೆನ್ನಗಿ ಉಳಿಮೆ ಮಾಡಿ ಸಿದ್ಧಗೊಳಿಸಬೇಕು. ಕೊನೆಯ ಬಾರಿ ಉಳುಮೆ ಮಾಡುವಾಗ ಹೆಕ್ಟೇರಿಗೆ ೧೦-೧೫ ಟನ್ ಕೊಟ್ಟಿಗೆ ಗೊಬ್ಬರವನ್ನು ಹಾಕಿ ಮಣ್ಣಿನಲ್ಲಿ ಚೆನ್ನಾಗಿ ಮಿಶ್ರ ಮಾಡಬೇಕು.
ಬೆಳೆಯನ್ನು ಮಳೆಗಾಲದಲ್ಲಿ(ಮೇ- ಆಗಸ್ಟ್) ಪ್ರಾರಂಭಿಸಬಹುದು. ಬಿತ್ತನೆಯ ಅಂತರ ೪೫×೯೦ ಸೆಂ. ಮೀ., ಈ ಬೆಳೆಗೆ ಹೆಕ್ಟೇರಿಗೆ ೪೦ː೨೦ː೨೦ ಕಿ. ಗ್ರಾಂ. ಪ್ರಮಾಣದಲ್ಲಿ ಕ್ರಮವಾಗಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ರಸಗೊಬ್ಬರಗಳನ್ನು ಕೊಡಬೇಕು. ಬೆಳೆಯಿಡುವ ಸಮಯದಲ್ಲಿ ಅರ್ಧ ಭಾಗ ಸಾರಜನಕ, ಪೂರ್ಣ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ಗೊಬ್ಬರಗಳನ್ನು ಮಣ್ಣಿನಲ್ಲಿ ಬೆರೆಸಬೇಕು. ಉಳಿದ ಸಾರಜನಕದಲ್ಲಿ ⅓ ಭಾಗವನ್ನು ನಾಟಿಯಾದ ಒಂದು ವರ್ಷದ ನಂತರ, ಉಳಿದದ್ದನ್ನು ಮೂರನೇ ವರ್ಷದಲ್ಲಿ ಕೊಡಬಹುದು.[೪]
ಬೆಳೆ ಬಿತ್ತನೆ ಸಮಯದಿಂದ ಗಿಡಗಳು ಚೆನ್ನಗಿ ಚಿಗುರಲು ಪ್ರಾರಂಭವಾಗುವವರೆಗೆ ನಿಗದಿತ ಅಂತರದಲ್ಲಿ ಬೆಳೆಗೆ ನೀರು ಹಾಯಿಸಬೇಕು. ಅನಂತರ ೫- ೬ ತಿಂಗಳವರೆಗೆ ೮-೧೦ ದಿನಗಳ ಅಂತರದಲ್ಲಿ ನೀರು ಹಾಯಿಸಬೇಕು. ಗಿಡಗಳು ಸ್ಥಿರಗೊಂಡ ನಂತರ ಗಡುತರವಾಗುವುದರಿಂದ ಹೆಚ್ಚಿನ ಆರೈಕೆ ಮಾಡಬೇಕಾಗಿಲ್ಲ.
ಕಳೆಗಳನ್ನು ನಿಯಂತ್ರಿಸಲು ಆಗಿಂದ್ದಾಗ್ಗೆ ಸಾಲುಗಳ ಮಧ್ಯೆ ಕುಂಟೆ ಹೊಡೆದು ನಂತರ ಸಾಲುಗಳ ಕಳೆ ತೆಗೆಯಬೇಕು.
ಈ ಬೆಳೆಯಲ್ಲಿ ಪ್ರಾರಂಭಿಕ ವರ್ಷದ್ದಲ್ಲಿ ಕ್ಯಾರೆಟ್, ಆಲೂಗಡ್ಡೆ ಮತ್ತು ಎಲೆಕೋಸುಗಳನ್ನು ಮಧ್ಯಂತರ ಬೆಲೆಗಳಾಗಿ ಬೆಳೆಯಬಹುದು. ಈ ಮಧ್ಯಂತರ ಬೆಳೆಗಳಿಗೆ ಗೊಬ್ಬರ ಇತ್ಯಾದಿಗಳನ್ನು ಕೊಡುವುದು ಅಗತ್ಯ. ಮಧ್ಯಂತರ ಬೇಸಾಯವನ್ನು ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿಲ್ಲದಿರುವಾಗ ಮಾಡಬಾರದು.
ಬೆಳೆ ಕೆಂಪು ಮಣ್ಣಿನ ಪ್ರದೇಶದಲ್ಲಿದ್ದರೆ ಗೆದ್ದಲಿನ ಭಾದೆ ಕಂಡುಬರುತ್ತದೆ. ಇದರ ಹತೋಟಿಗೆ ಶೇ. ೫೦ರ ಕ್ಲೋರೈಡನ್ನು ಹೆಕ್ಟೇರಿಗೆ ೨೫-೩೦ ಕಿ. ಗ್ರಾಂ. ಪ್ರಮಾಣದಲ್ಲಿ ಬಳಸಬೇಕು. ಹತ್ತಿಯ ಬೂದಿ ಮೂತಿಹುಳು, ಬೇರುಕೊಳೆ, ಕತ್ತುಕೊಳೆ, ಸೊರಗು ರೋಗ, ತುಕ್ಕು ರೋಗ, ಎಲೆ ಒಣಗು ರೋಗ ಮತ್ತು ಸರ್ಕೋಸ್ಪೋರ ಎಲೆ ಚುಕ್ಕೆ ರೋಗಗಳು ಬರುತ್ತವೆ. ಈ ರೋಗಗಳ ಹತೋಟಿಗೆ ಬ್ರಾಸಿಕಾಲ್ ಮತ್ತು ಬ್ಯಾವಿಸ್ಟಿನ್ ಬಳಸಬಹುದು.
ಅತಿಮಧುರ ಒಂದು ಔಷಧೀಯ ಸಸ್ಯ. ಇದರ ಸಸ್ಯನಾಮ ಗ್ಲೈಸಿರೈಸಿಕ್ ಗ್ಲಾಬ್ರ (glycyrrhiza-glabra). ಜೇಷ್ಠಮಧು, ಯಷ್ಠಿಮಧುಕ ಎಂದು ಕರೆಯಲ್ಪಟ್ಟಿದೆ. ಇದಕ್ಕೆ ಮಧುರ ಕಪ್ಪು ಮತ್ತು ಗಂಟಲು ಕೆಟ್ಟಾಗ ಸಿಹಿಯುಕ್ತ ಮತ್ತು ತಂಪುಕಾರಕ ಗುಣಬರಲು ಅದರಲ್ಲಿರುವ ಗ್ಲೈಸಿರೈಸಿನ್ ಕಾರಣ. ಇದರ ಮೂಲ ಸ್ಥಾನ ಯುರೇಶ್ಯ. ಇದನ್ನು ಮುಖ್ಯವಾಗಿ ಸ್ಪೈನ್, ಇಟಲಿ, ಫ್ರಾನ್ಸ್, ರಷ್ಯಾ, ಸಿರಿಯಾ, ಇರಾನ್, ಇರಾಕ್, ಟರ್ಕಿ, ಉತ್ತರ ಆಫ್ರಿಕಾ ಮತ್ತು ಚೈನಾ ದೇಶಗಳಲ್ಲಿ ಬೆಳೆಯಲಾಗುತ್ತದೆ. ಭಾರತಕ್ಕೆ ಇದನ್ನು ಇರಾಕ್, ಪರ್ಶಿಯಾ ಮತ್ತು ಏಷಿಯಾದ ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಶೀತಕರವಾದ ಹವಾಗುಣವಿರುವ ಹಿಮಾಲಯ ಮತ್ತು ದಕ್ಷಿಣ ಭಾರತದ ಬೆಟ್ಟ ಪ್ರದೇಶಗಳಲ್ಲಿ ಶ್ರೀನಗರ, ಕಾಶ್ಮೀರ, ಉತ್ತರಾಖಂಡ, ಗುಜರಾತ್ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ.