ಹಳದಿಗಲ್ಲದ ಕಳ್ಳಿಪೀರ (ಮೆರೊಪ್ಸ್ ಏಪಿಯಾಸ್ಟರ್)ವು ಬೀ-ಈಟರ್ ಕುಟುಂಬ ಮೆರೊಪಿಡೆ (Meropidae)ಗೆ ಸೇರಿದ ಹಕ್ಕಿಯಾಗಿದೆ. ಇದು ದಕ್ಷಿಣ ಯೂರೋಪ್ನಲ್ಲಿ ಮತ್ತು ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದ ಕೆಲವು ಭಾಗಗಳಲ್ಲಿ ಸಂತಾನೊತ್ಪತ್ತಿ ಮಾಡುತ್ತದೆ. ಇದು ಉಷ್ಣವಲಯದ ಆಫ್ರಿಕಾಕ್ಕೆ ಚಳಿಗಾಲದ ವಲಸೆಗಾರ. ಮತ್ತು ವಾಯುವ್ಯ ಯುರೋಪ್ನಲ್ಲಿ ಸಾಂದರ್ಭಿಕ ಸಂತಾನವೃದ್ಧಿ ಮಾಡುವುದು ಕಂಡುಬಂದಿದೆ.
ಹಳದಿಗಲ್ಲದ ಕಳ್ಳಿಪೀರವನ್ನು ಔಪಚಾರಿಕವಾಗಿ ಸ್ವೀಡಿಷ್ ನೈಸರ್ಗಿಕವಾದಿ ಕಾರ್ಲ್ ಲಿನೆಯಸ್ ತಮ್ಮ "ಸಿಸ್ಟೆಮ ನ್ಯಾಚುರೆ" (Systema Naturae) ಹೊತ್ತಿಗೆಯಲ್ಲಿ, ೧೭೫೮ರಲ್ಲಿ ವಿವರಿಸಿದ್ದಾನೆ. ಮೆರೊಪ್ಸ್ (Merops) ಕುಲದ ಹೆಸರಿನ ಅರ್ಥ ಪ್ರಾಚೀನ ಗ್ರೀಕ್ನಲ್ಲಿ "ಬೀ-ಈಟರ್" ಎಂದಾಗಿದೆ.[೨]
ಇತರ ಕಳ್ಳಿಪೀರಳಂತೆ, ಹಳದಿಗಲ್ಲದ ಕಳ್ಳಿಪೀರವು ಸಮೃದ್ಧವಾದ ಬಣ್ಣವನ್ನು ಹೊಂದಿದ್ದು ತೆಳುವಾದ ಹಕ್ಕಿಯಾಗಿದೆ. ಇದು ಕಂದು ಮತ್ತು ಹಳದಿ ಮೇಲಿನ ಭಾಗಗಳನ್ನು ಹೊಂದಿರುತ್ತದೆ ಮತ್ತು ರೆಕ್ಕೆಗಳು ಹಸಿರು ಬಣ್ಣದಿಂದ ಕೂಡಿದ್ದರೆ, ಕೊಕ್ಕಿನ ಬಣ್ಣ ಕಪ್ಪು. ಇದು ಎರಡು ಉದ್ದವಾದ ಕೇಂದ್ರ ಬಾಲ ಗರಿಗಳನ್ನು ಒಳಗೊಂಡಂತೆ ೨೭-೨೯ ಸೆಂ.ಮೀ (೧೦.೬-೧೧.೪ ಇಂ.) ಉದ್ದವನ್ನು ತಲುಪಬಹುದು. ಲಿಂಗಗಳು ಒಂದೇ ರೀತಿ ಇರುತ್ತವೆ ಅಂದರೆ ಗಂಡು ಮತ್ತು ಹೆಣ್ಣನ್ನು ಭಿನ್ನವಾಗಿ ಹೇಳಲು ಸಾಧ್ಯವಿಲ್ಲ. ಹೆಣ್ಣು ಭುಜದ ಮೇಲೆ ಚಿನ್ನದ ಬಣ್ಣ ಗರಿಗಳ ಬದಲು, ಹಸಿರು ಬಣ್ಣವನ್ನು ಹೊಂದಿರುತ್ತದೆ. ವಯಸ್ಕರು ಜೂನ್ ಅಥವಾ ಜುಲೈನಲ್ಲಿ ಮೌಲ್ಟ್ (Moult) ಆಗಲು ಪ್ರಾರಂಭಿಸಿ, ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತವೆ. ಚಳಿಗಾಲದಲ್ಲಿ ಆಫ್ರಿಕಾದಲ್ಲಿ ಸಂತಾನೋತ್ಪತ್ತಿ ಮಾಡಲು ಸಂತಾನೋತ್ಪತ್ತಿ ಮೌಲ್ಟ್ (Moult) ಆಗುತ್ತದೆ.
ಹಳದಿಗಲ್ಲದ ಕಳ್ಳಿಪೀರದ ಚಿತ್ರಕಲೆ John Gould (ಪಕ್ಷಿವಿಜ್ಞಾನಿ)