dcsimg

ಐಕಾರ್ನಿಯ ( Kannada )

provided by wikipedia emerging languages

ಐಕಾರ್ನಿಯ ನೀರಿನಲ್ಲಿ ಅಥವಾ ಹೆಚ್ಚಿನ ತೇವದಲ್ಲಿ ಬೆಳೆಯುವ, ಮೂಲಿಕೆಯಂಥ ಒಂದು ಏಕದಳ ಸಸ್ಯಜಾತಿ.

ಸಸ್ಯ ಶಾಸ್ತ್ರೀಯ ವರ್ಗೀಕರಣ

ಪಾಂಟಿಡೇರಿಯೇಸಿ ಕುಟುಂಬಕ್ಕೆ ಸೇರಿದೆ. ಈ ಜಾತಿಯಲ್ಲಿ 5 ಪ್ರಭೇದಗಳಿವೆ. ಅವುಗಳಲ್ಲಿ ಐ, ಕ್ರ್ಯಾಸಿಪೆಸ್ ಎಂಬುದು ಮುಖ್ಯವಾದದ್ದು.

ಸಸ್ಯ ಲಕ್ಷಣಗಳು

ಐಕಾರ್ನಿಯ ಸಸ್ಯದ ಕಾಂಡ ಸಂಯುಕ್ತ ರೀತಿಯದು. ಪಕ್ಕದ ಕಾಂಡ ಮುಖ್ಯ ಕಾಂಡಕ್ಕೆ ಅಂಟಿಕೊಂಡಿರುತ್ತದೆ. ಗಿಣ್ಣಿನ ಬಳಿ ಬೇರು. ಎಲೆಗಳು ಚಕ್ರ ಅಥವಾ ಹೃದಯದ ಆಕಾರವಾಗಿರುತ್ತವೆ. ಐ, ಕ್ರ್ಯಾಸಿಪೆಸಿನಲ್ಲಿ ಎಲೆಯ ತೊಟ್ಟು ಚೀಲದಂತೆ ಊದಿಕೊಂಡಿರುತ್ತದೆ. ಹೂಗೊಂಚಲು ತೆನೆಯಾಗಿದ್ದು ಉಪಪತ್ರ ಅಥವಾ ಯುಗದಿಂದ ಆವೃತವಾಗಿರುತ್ತದೆ. ಹೂಗಳು ದ್ವಿಲಿಂಗಿಗಳಾಗಿಯೂ ಪಾರ್ಶಸೌಷ್ಠದವುಳ್ಳವಾಗಿಯೂ ಇವೆ. ಪುಷ್ಪಾಂಗ ಸಂಖ್ಯೆ ಮೂರರ ಅಪವರ್ತ್ಯದಲ್ಲಿದೆ. ಆಲಿಕೆಯಾಕಾರದಲ್ಲಿರುವ ಪುಷ್ಪಾವರಣ ನೀಲನೇರಳೆ ಅಥವಾ ಬಿಳಿ ಬಣ್ಣದ್ದು. ಅದರಲ್ಲಿ 6 ಪುಷ್ಪಪತ್ರಗಳಿರುತ್ತವೆ. ಕೇಸರಗಳು 6. ಕೇಸರದಂಡಗಳಲ್ಲಿ 3 ಉದ್ದವಾಗಿಯೂ 3 ಚಿಕ್ಕವಾಗಿಯೂ ಇವೆ. ಅಂಡಕೋಶದಲ್ಲಿ 3 ಭಾಗಗಳಿವೆ. ಅಂಡಾಶಯ ಉಚ್ಚಸ್ಥಿತಿಯಲ್ಲಿದೆ. ಅಂಡಕಗಳು ಪ್ರತಿಕುಹರದಲ್ಲೂ ಅಧಿಕ ಸಂಖ್ಯೆಯಲ್ಲಿವೆ.

ಹರಡುವಿಕಿ

ಐ.ಕ್ರ್ಯಾಸಿಪೆಸ್ ಎಂಬ ಪ್ರಭೇದ ಅಮೆರಿಕ, ಆಸ್ಟ್ರೇಲಿಯಾ, ಜಾವ, ಭಾರತ, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಹೆಚ್ಚಾಗಿದ್ದು ನೀರಿನಲ್ಲಿ ಬೃಹತ್ ಕಳೆಯಾಗಿ ವ್ಯಾಪಿಸಿ ತೊಂದರೆಯನ್ನುಂಟುಮಾಡುತ್ತಿದೆ. ಕೆಲವು ಕಡೆಗಳಲ್ಲಿ ಹಡಗಿನ ಸಂಚಾರಕ್ಕೂ ಅಡ್ಡಿಯನ್ನುಂಟುಮಾಡಿದೆ. ಕೆರೆ, ಕಾಲುವೆ, ಕುಂಟೆಗಳಲ್ಲಿ ಒತ್ತಾಗಿ ಬೆಳೆದು ಸೊಳ್ಳೆಗಳ ಉದ್ಭವಸ್ಥಾನವಾಗಿದೆ. ಈ ಸಸ್ಯವನ್ನು ನಿರ್ಮೂಲ ಮಾಡುವುದು ಒಳ್ಳೆಯದಾದರೂ ಈ ಜಾತಿಯ ಕೆಲವು ಪ್ರಭೇದಗಳನ್ನಾದರೂ ಅವುಗಳ ಚೆಲುವಾದ ಹೂಗಳಿಗಾಗಿ ಉಳಿಸಿಕೊಳ್ಳಬೇಕಾಗುತ್ತದೆ.

ಛಾಯಾಂಕಣ

ಬಾಹ್ಯ ಸಂಪರ್ಕಗಳು

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಐಕಾರ್ನಿಯ: Brief Summary ( Kannada )

provided by wikipedia emerging languages

ಐಕಾರ್ನಿಯ ನೀರಿನಲ್ಲಿ ಅಥವಾ ಹೆಚ್ಚಿನ ತೇವದಲ್ಲಿ ಬೆಳೆಯುವ, ಮೂಲಿಕೆಯಂಥ ಒಂದು ಏಕದಳ ಸಸ್ಯಜಾತಿ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು