dcsimg

ಹೊನ್ನೆ ( Kannada )

provided by wikipedia emerging languages

ಹೊನ್ನೆ(Kino Tree)ಒಂದು ದೊಡ್ಡ ಪ್ರಮಾಣದ ಮುಖ್ಯ ಚೌಬೀನೆ ಮರ.ಮಿಶ್ರಪರ್ಣಪಾತಿಅರಣ್ಯಗಳಲ್ಲಿ ೭೫ ರಿಂದ ೨೦೦ ಸೆ.ಮೀ.ಮಳೆ ಬೀಳುವ ಪ್ರದೇಶಗಲ್ಲಿ ಉತ್ತಮವಾಗಿ ಬೆಳೆಯುತ್ತದೆ.ಇದು ಭಾರತ,ನೇಪಾಳ,ಶ್ರೀಲಂಕಾಗಳ ಮೂಲ(Native) ಮರ.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಲೆಗುಮಿನೋಸೆ ಕುಟುಂಬದಲ್ಲಿದೆ.ಸಸ್ಯಶಾಸ್ತ್ರೀಯ ಹೆಸರು:ಟೆರೊಕಾರ್ಪಸ್ ಮಾರ್ಸುಪಿಯಮ್ (Pterocarpus marsupium).ಕನ್ನಡದಲ್ಲಿ 'ಹನೆ','ಬಿಜಸಾಲ'ಎಂದೂ ತುಳು ಬಾಷೆಯಲ್ಲಿ ಬೇಂಗ ಎಂದೂ ಕರೆಯುತ್ತಾರೆ.

ಸಸ್ಯದ ಗುಣಲಕ್ಷಣ

ದೊಡ್ಡ ಪ್ರಮಾಣದ ಮರ.ಹರಡಿದ ಕೊಂಬೆಗಳು.ತೊಗಟೆ ದಪ್ಪವಾಗಿದ್ದು ಕೆತ್ತಿದಾಗ ಎಳೆಗೆಂಪು ಬಣ್ಣ ಕಾಣುತ್ತದೆ.ಹಳೆಯ ಮರಗಳಿಂದ ರಕ್ತ ಕೆಂಪಿನ ಬಂಧಕ ಅಂಟು (Astringent Gum)ದೊರೆಯುತ್ತದೆ.ದಾರುವಿನಿಂದ ಉತ್ತಮ ಚೌಬೀನೆ ದೊರೆಯುತ್ತದೆ.ದಾರುವು ಗಡುಸಾಗಿದ್ದು,ಚೇಗು ಹಳದಿ ಮಿಶ್ರಿತ ಕಂದು ಬಣ್ಣದ್ದಾಗಿದೆ.ಬಾಳಿಕೆ ಬರುತ್ತದೆ.ದಾರುವಿನ ಮೇಲೆ ನೀರು ಬಿದ್ದಲ್ಲಿ ಕಪ್ಪು ಬಣ್ಣದ ಕಲೆಯುಂಟಾಗುತ್ತದೆ.

ಉಪಯೋಗಗಳು

ಅತಿಮುಖ್ಯ ಚೌಬೀನೆ ಮರಜಾತಿಗಳಲ್ಲಿ ಇದೂ ಒಂದು.ಗೃಹ ನಿರ್ಮಾಣ,ದೋಣಿ ತಯಾರಿಕೆ ಮುಂತಾಗಿ ಮರಗೆಲಸಕ್ಕೆ ಉತ್ತಮ ಜಾತಿಯ ಮರ.ಇದರ ತೊಗಟೆಯಲ್ಲಿ ದೊರೆಯುವ ರಕ್ತ ಕೆಂಪಿನ ಬಂಧಕ ಅಂಟು (Astringent Gum)ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ.

ಆಧಾರ ಗ್ರಂಥಗಳು

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಹೊನ್ನೆ: Brief Summary ( Kannada )