dcsimg

ಎಂಟೊಪ್ರಾಕ್ಟ ( Canarês )

fornecido por wikipedia emerging languages
 src=
ಎಂಟೊಪ್ರಾಕ್ಟ

ಎಂಟೊಪ್ರಾಕ್ಟ- ಆಳವಿಲ್ಲದ ನೀರಿನಲ್ಲಿ ಒಂಟೊಂಟಿಯಾಗಿ ಅಥವಾ ಸಾಮೂಹಿಕವಾಗಿ ಸಾಗರದ ಜೊಂಡು ಮುಂತಾದ ವಸ್ತುಗಳಿಗೆ ಅಂಟಿಕೊಂಡು ಜೀವಿಸುವ ಸಣ್ಣಪ್ರಾಣಿಗಳ ಒಂದು ವರ್ಗ, ಇವುಗಳಲ್ಲಿ ಅನೇಕ ಪ್ರಾಣಿಗಳು ಸ್ಪಾಂಜ್ ಮತ್ತು ಅಸಿಡಿಯ ಪ್ರಾಣಿದೇಹಕ್ಕೆ ಅಂಟಿಕೊಂಡು ಜೀವಿಸುತ್ತವೆ. ಇವುಗಳಲ್ಲಿ ಚಾಟಿಯಂಥ ಕೊಂಬುಗಳಿರುವುದರಿಂದ (ಟೆಂಟಿಕಲ್) ಇವನ್ನು ಹಿಂದೆ ಬಯೋeóÉೂೀವ ವಂಶಕ್ಕೆ ಸೇರಿಸಿತ್ತು. ಆದರೆ ಈ ಪ್ರಾಣಿಗಳಲ್ಲಿ ಕೆಲವು ವೈಶಿಷ್ಟ್ಯಗಳಿರುವುದರಿಂದ ಈಚೆಗೆ ಇವನ್ನು ಪ್ರತ್ಯೇಕ ವಂಶವೆಂದು ಪರಿಗಣಿಸಲಾಗಿದೆ. ಇದರಲ್ಲಿ ಪೆಡಿಸೆಲ್ಲೀನ, ಲಾಕ್ಸೊಸೋಮ, ಅರ್ನಟೆಲ್ಲ ಇತ್ಯಾದಿ ಕೆಲವು ಜಾತಿಗಳಿವೆ. ಅರ್ನಟೆಲ್ಲ ಗ್ರೇಸಿಲ್ಲಿಸ್ (ಉತ್ತರ ಅಮೆರಿಕ) ಅರ್ನಟೆಲ್ಲ ಇಂಡಿಕ (ಭಾರತ) ಈ ಎರಡು ಪ್ರಭೇದಗಳು ಸಿಹಿನೀರಿನಲ್ಲೂ ಮಿಕ್ಕವು ಸಾಗರದಲ್ಲೂ ಜೀವಿಸುತ್ತವೆ.

ಎಂಟೊಪ್ರಾಕ್ಟಗಳ ಪಾತ್ರೆಯಂಥ ದೇಹ

ಎಂಟೊಪ್ರಾಕ್ಟಗಳಲ್ಲಿ ಪಾತ್ರೆಯಂಥ ದೇಹವನ್ನು, ಹಿಡಿ ಅಥವಾ ತೊಟ್ಟನ್ನೂ ಗುರುತಿಸಬಹುದು. ದೇಹಭಾಗದಲ್ಲಿ ಉದರವಿದೆ. ತೊಟ್ಟಿನ ಮೂಲಕ ಪ್ರಾಣಿ ಪದಾರ್ಥಗಳಿಗೆ ಅಂಟಿಕೊಂಡಿರುತ್ತದೆ. ದೇಹದ ಇನ್ನೊಂದು ತುದಿಯಲ್ಲಿ ಕೋಡುಗಳಿವೆ. ಆ ಕೋಡುಗಳ ಒಳಭಾಗದಲ್ಲಿ ಕೂದಲುಗಳಿವೆ. ಎಲ್ಲ ಕೋಡುಗಳನ್ನೂ ತಳದಲ್ಲಿ ಒಂದು ಪೊರೆ ಒಟ್ಟುಗೂಡಿಸಿದೆ. ಕೋಡುಗಳಿರುವ ತುದಿ ಪ್ರಾಣಿಯ ತಳಭಾಗ; ತೊಟ್ಟಿನ ಭಾಗವೇ ಬೆನ್ನು ಅಥವಾ ಮೇಲಿನಭಾಗ. ಕೊಂಬುಗಳನ್ನು ವೆಸ್ಟಿಬ್ಯೂಲ್ ಎಂಬ ಭಾಗಕ್ಕೆ ಸೆಳೆದುಕೊಳ್ಳಬಹುದು. ಕೋಡುಗಳ ವೃತ್ತದ ನಡುವೆಯಿರುವ ವೆಸ್ಟಿಬ್ಯೂಲಿನಲ್ಲಿ ಬಾಯೂ ಮಲದ್ವಾರವೂ ಇವೆ. ಕೊಂಬು ಮತ್ತು ವೆಸ್ಟಿಬ್ಯೂಲುಗಳನ್ನುಳಿದ ಮಿಕ್ಕ ದೇಹಭಾಗದ ಮೇಲೆಲ್ಲ ಒಂದು ಪೊರೆ ಇದೆ. ಇದಕ್ಕೂ ಒಳಗೆ ಮೇಲ್ತೊಕ್ಕೂ ಇನ್ನು ಒಳಗೆ ಲಂಬಸ್ನಾಯುಗಳಿಂದಾದ ಪದರವಿದೆ. ದೇಹದೊಳಗೆ ಇರುವ ಪೊಟರೆ ಒಂದು ರೀತಿಯ ಮಿಥ್ಯದೇಹಾವಕಾಶ. ಇದರಲ್ಲಿ ಲೋಳೆಯಂಥ ದ್ರವ ತುಂಬಿದೆ.

ಎಂಟೊಪ್ರಾಕ್ಟಗಳ ಜೀವಿಗಳ ಜೀರ್ಣಾಂಗ

ಈ ಜೀವಿಗಳಲ್ಲಿ ಜೀರ್ಣಾಂಗ U ಆಕಾರದಲ್ಲಿದೆ; ಬಾಯಿ, ಅನ್ನನಾಳ, ಜಠರ ಕೋಶ, ಕಿರಿದಾದ ಕರುಳು, ಗುದನಾಳ ಮತ್ತು ಗುದದ್ವಾರಗಳು ಇವುಗಳ ಇತರ ಭಾಗಗಳು. ಜಠರದ ಎರಡು ಕಡೆಗಳಲ್ಲೂ ಪ್ರೊಟೊನೆಫ್ರೀಡಿಯ ಎಂಬ ವಿಸರ್ಜನಾಂಗಗಳಿವೆ. ಅವೆರಡೂ ಹಿಂಭಾಗದಲ್ಲಿ ಸೇರಿ ಒಂದು ನಾಳವಾಗಿ ಹೊರಕ್ಕೆ ತೆರೆಯುತ್ತದೆ. ಜಠರದ ತಳಭಾಗದಲ್ಲಿ ಒಂದು ನರಮುಡಿಯಿದೆ. ಅದರಿಂದ ನರಗಳು ಕೊಂಬುಗಳಿಗೂ ತೊಟ್ಟು, ಜನನಾಂಗ ಮತ್ತು ದೇಹದ ಇತರ ಭಾಗಗಳಿಗೂ ಹೋಗಿರುತ್ತದೆ.ಎಂಟೊಪ್ರಾಕ್ಟದ ಕೆಲವು ಪ್ರಾಣಿಗಳಲ್ಲಿ ಗಂಡು ಮತ್ತು ಹೆಣ್ಣು ಜನನಾಂಗಗಳೆರಡೂ ಉಂಟು; ಇಂಥ ದ್ವಿಲಿಂಗಿಗಳಲ್ಲಿ ಅಂಡಕೋಶದ ಹಿಂಭಾಗದಲ್ಲಿ ಒಂದು ಜೊತೆ ವೃಷಣಗಳು ಇರುತ್ತವೆ. ಅವೆರಡರ ನಾಳಗಳೂ ಎರಡು ಕಡೆಯಲ್ಲೂ ಸೇರುತ್ತವೆ; ಮತ್ತೆ ಅವೆರಡು ನಾಳಗಳೂ ಒಟ್ಟುಗೂಡಿ ಹೊರಕ್ಕೆ ತೆರೆಯುತ್ತವೆ ಭ್ರೂಣದ ಪ್ರಥಮ ಹಂತ ವೆಸ್ಟಿಬ್ಯೂಲಿನಲ್ಲೇ ಕಳೆಯುತ್ತದೆ. ಅನಂತರ ಈಜುವ ಡಿಂಭ ಅದರಿಂದ ಹೊರಬಂದು ಯಾವುದಾದರೂ ವಸ್ತುವಿಗೆ ಕಚ್ಚಿಕೊಂಡು ರೂಪ ಪರಿವರ್ತನೆಹೊಂದಿ ವಯಸ್ಕಜೀವಿಯ ಅಂಗಭಾಗಗಳನ್ನು ಪಡೆದುಕೊಳ್ಳುತ್ತದೆ. ಈ ಪ್ರಾಣಿಯ ಡಿಂಭ ಟ್ರೋಕೊಫೋರ್ ಡಿಂಭವನ್ನು ಸ್ವಲ್ಪಮಟ್ಟಿಗೆ ಹೋಲುವುದಾದರೂ ಹಲವು ವ್ಯತ್ಯಾಸಗಳನ್ನು ವ್ಯಕ್ತಪಡಿಸುತ್ತದೆ. ಎಂಟೊಪ್ರಾಕ್ಟದ ಎಲ್ಲ ಪ್ರಾಣಿಗಳಲ್ಲೂ ನಿರ್ಲಿಂಗರೀತಿಯ ವಂಶಾಭಿವೃದ್ಧಿ ನಡೆಯುತ್ತದೆ. ಲಾಕ್ಸೊಸೋಮದಲ್ಲಿ ಕೇಲಿಕ್ಸಿನ ಮೇಲ್ಭಾಗದಲ್ಲಿ ಮೊಗ್ಗೆಗಳಂತೆ ಮೂಡಿ ಒಂದೊಂದು ಪದಾರ್ಥಗಳಿಗೆ ಅಂಟಿಕೊಂಡು ಸ್ವತಂತ್ರಜೀವನವನ್ನು ಆರಂಭಿಸುತ್ತದೆ. ಸಾಮೂಹಿಕ ಜೀವಿಯಾದ ಪೆಡಿಸೆಲ್ಲಿನದಲ್ಲಿ ತೊಟ್ಟಿನ ಬಳಿ ಮೊಗ್ಗುಗಳು ಮೂಡಿ ಅಲ್ಲೇ ಇರುತ್ತವೆ. ಆ ವೇಳೆಗೆ ಒಂದು ಗೋಡೆ ಉದ್ಭವಿಸಿ ಕನ್ಯಾಸಮೂಹವನ್ನು ಕಾಯಿ ಸಮೂಹದಿಂದ ಪ್ರತ್ಯೇಕಿಸುತ್ತದೆ. ಹೀಗೆ ನೂತನ ಸಮೂಹಜೀವನ ಆರಂಭವಾಗುತ್ತದೆ. ಎಂಟೊಪ್ರಾಕ್ಟವನ್ನು ಹಿಂದೆ ಎಕ್ಟೊಪ್ರಾಕ್ಟದೊಡನೆ ಸೇರಿಸಿದ್ದುದು ಉಚಿತವಲ್ಲವೆಂಬುದು ಈಗ ಸ್ಪಷ್ಟಪಟ್ಟಿದೆ. ಏಕೆಂದರೆ ಎಕ್ಟೊಪ್ರಾಕ್ಟನಲ್ಲಿ ನಿಜವಾದ ದೇಹಾವಕಾಶವುಂಟು. ಜೊತೆಗೆ ಅದರಲ್ಲಿ ಮಲದ್ವಾರ ಕೋಡುಗಳ ವೃತ್ತದಿಂದ ಹೊರಗಿದೆ. ಇವೆರಡಕ್ಕೂ ಇರುವ ಸಾಮ್ಯಗಳಲ್ಲಿ ಕೂದಲಿಂದ ಆವೃತವಾದ ಕೋಡುಗಳು ಮತ್ತು U ಆಕಾರದ ಜೀರ್ಣಾಂಗ ಇವು ಕೇವಲ ಬಾಹ್ಯಸಾಮ್ಯಗಳು ಮಾತ್ರ. ಈಚೆಗೆ ಎಂಟೊಪ್ರಾಕ್ಟ್ ಹೆಚ್ಚಾಗಿ ರೋಟಿಫೆರದ ವರ್ಗಕ್ಕೆ ಸಂಬಂಧಿಸಿದೆಯೆಂದು ಹೇಳಲಾಗುತ್ತಿದೆ. ರೋಟಿಫೆರದ ಕಾಲೊತೀಕೇಸಿಯ ಪಂಗಡ ಎಂಟೊಪ್ರಾಕ್ಟಗಳಂತೆ ಅಂಗರಚನೆಯನ್ನು ಪಡೆದಿರುವುದು ಮೇಲಿನ ಅಭಿಪ್ರಾಯವನ್ನು ಎತ್ತಿಹಿಡಿಯುತ್ತದೆ.

ಉಲ್ಲೇಖಗಳು

licença
cc-by-sa-3.0
direitos autorais
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು
original
visite a fonte
site do parceiro
wikipedia emerging languages

ಎಂಟೊಪ್ರಾಕ್ಟ: Brief Summary ( Canarês )

fornecido por wikipedia emerging languages
 src= ಎಂಟೊಪ್ರಾಕ್ಟ