ಈ ಮರವನ್ನು ಶಾಲ್ಮಲೀ ಎಂದು ಸಹಾ ಕರೆಯಲಾಗಿದೆ. ಭಾರತದೇಶದಾದ್ಯಂತ ಇದನ್ನು ಬೆಳೆದರೂ, ದಕ್ಷಿಣಭಾರತದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಬಾಣಕವಿಯ ಕಾದಂಬರಿ ಕಾವ್ಯದಲ್ಲಿ ವಿಂಧ್ಯಾಟವಿಯಲ್ಲಿದ್ದ ಭವ್ಯವಾದ ಶಾಲ್ಮಲಿ ಮರದ ವರ್ಣನೆ ಪ್ರಸಿದ್ಧವಾದದ್ದು. ಸುತ್ತಲೂ ತನ್ನ ರೆಂಭೆ-ಕೊಂಬೆಗಳನ್ನು ಚಾಚಿ ಹುಲುಸಾಗಿಬೆಳೆಯುವ ಈ ಮರ ತಾಂಡವನೃತ್ಯಕ್ಕಾಗಿ, ಸಾವಿರಕೈಗಳನ್ನುಚಾಚಿದ ನಟರಾಜನನ್ನು ನೆನಪಿಸಿತಂತೆ.
ತಾವರೆಯನ್ನು ಹೋಲುವ ಕೆಂಪು ಪುಷ್ಪಗಳು. ಡಿಸೆಂಬರ್ ನಲ್ಲಿ ಬೂರಗದ ಮರದ ಎಲೆ ಉದುರಲು ಆರಂಭ. ಸಸ್ಯ ಶಾಸ್ತ್ರದಲ್ಲಿ ಬೂರಗದ ಮರ, Bombax Ceiba, ಮತ್ತು Salmalia Malabarica ಎಂದು ಹೆಸರಿರುವ , Bombacaceae ಕುಟುಂಬಕ್ಕೆ ಸೇರಿದೆ. ಇಂಗ್ಲಿಷ್ ನಲ್ಲಿ , Silk Cotton Tree ಎನ್ನುತ್ತಾರೆ. ಹೊಳಪಿನ ೫ ದಳಗಳಿಂದ ಕೂಡಿದ ಸಂಯುಕ್ತ ಪತ್ರಗಳು. ಹೂಗಳು ಅರಳಿದಾಗ ದೂರದಿಂದಲೇ ಅದನ್ನು ನಾವು ಗಮನಿಸಬಹುದು. ಕೊಂಬೆಗಳ ತುದಿಯಲ್ಲಿ ಅಂಗೈ ಅಗಲದ ಕಡುಕೆಂಪುಬಣ್ಣದ ಆಕರ್ಷಕ ಹೂಗಳು. ಹೂವಿನಲ್ಲಿ ಅಧಿಕ ಸಂಖ್ಯೆಯಲ್ಲಿ ಕೇಸರಗಳಿರುತ್ತವೆ. ಅರಳಿದ ಒಂದೇ ದಿನದಲ್ಲಿ ಬಾಡಿ ಕೆಳಗುರುಳುತ್ತವೆ. ೧೦-೧೨ ಸೆಂಟಿಮೀಟರ್ ಉದ್ದದ ಕಾಯಿಗಳು ಬಿಡುತ್ತವೆ. ಬಲಿತ ಕಾಯಿ, ಹಣ್ಣಾಗುವಮೊದಲೇ ಒಡೆದು ಹತ್ತಿ ಹೊರಗೆ ಬರುತ್ತದೆ. ನೂರಾರು ಕಪ್ಪುಬಣ್ಣದ ಬೀಜಗಳು ಹತ್ತಿಯಲ್ಲಿ ಇರುತ್ತವೆ. ಹತ್ತಿ, ಗಾಳಿಯಲ್ಲಿ ತೇಲಿ ದೂರದವರೆ ಬೀಜವನ್ನು ಕೊಂಡೊಯ್ಯುತ್ತವೆ. ಸಂಸ್ಕೃತದಲ್ಲಿ ಬೂರುಗಕ್ಕೆ ಶಾಲ್ಮಲೀ, ತೂಲಿನೀ, ರಮ್ಯಪುಷ್ಪ, ನಿರ್ಗಂಧ ಪುಷ್ಪ, ಎನ್ನುವ ಹೆಸರುಗಳಿವೆ. ಈ ಹೆಸರುಗಳು ಅನ್ವರ್ಥವಾಗಿವೆ. ತೂಲಿನೀ ಎಂದರೆ, ಹತ್ತಿಯನ್ನೀಯುವುದು ಎಂದರ್ಥ.
ಬೂರುಗದ ಮರದ ಜಾತಿಯಲ್ಲಿ ಎರಡು ವಿಧಗಳು, ಕೆಂಪು, ಹಾಗೂ ಬಿಳಿ. ಮರದ ತೊಗಟೆಯಮೇಲೆ ಮುಳ್ಳುಗಳಿರುತ್ತವೆ. ಕೆಲವುಜಾತಿಯಲ್ಲಿ ಮುಳ್ಳುಗಳಿರುವುದಿಲ್ಲ. ಹೂ ತಳೆದ ಮರ, ಅದರಲ್ಲೂ ಕೆಂಪು ಹೂ. ಮರದ ಮುಟ್ಟಿನಿಂದ ರಥದ ನಿರ್ಮಾಣಮಾಡುತ್ತಾರೆ. ಹಿಂದೆ, ಬೂರುಗದಹತ್ತಿಯನ್ನು ದಿಂಬಿನಲ್ಲಿ ತುಂಬಿ ತಲೆದಿಂಬಾಗಿ ಉಪಯೋಗಿಸುತ್ತಿದ್ದರು. ನಾಟದಿಂದ ಬೆಂಕಿಕಡ್ಡಿ, ಬೆಂಕಿಪೊಟ್ಟಣ, ಪೆನ್ಸಿಲ್, ಪ್ಲೈವುಡ್, ತಯಾರಿಸುತ್ತಾರೆ. ಹಕ್ಕಿಗಳು , ಅಳಿಲುಗಳು, ಮಂಗಗಳು, ಬೂರುಗದ ಮರದ, ಮೊಗ್ಗು, ಹೂಗಳನ್ನು ತಿನ್ನುತ್ತವೆ. ಮೊಗ್ಗು, ಮತ್ತು ಪಾತ್ರೆಯ ದಳಗಳನ್ನು ತರಕಾರಿಯಂತೆ ಕೆಲವರು ಬಳಸುತ್ತಾರೆ. ಮರದ ಅಂಟನ್ನು ಔಷಧಿಯಾಗಿಯೂ ಬಳಸಬಹುದು. ಮೌರ್ಯರಕಾಲದಲ್ಲಿ ಊರಿನ ಗಡಿಗಳನ್ನು ಗುರುತಿಸಲು ಬೂರುಗದಮರವನ್ನು ನೆಡುತ್ತಿದ್ದರಂತೆ.