dcsimg
Image of Commiphora caudata (Wight & Arn.) Engl.
Creatures » » Plants » » Dicotyledons » » Myrrh Family »

Commiphora caudata (Wight & Arn.) Engl.

ಕೊಂಡ ಮಾವು ( Kannada )

provided by wikipedia emerging languages

ಕೊಂಡ ಮಾವುಕಾಮಿಫೋರ ಕಾಡೇಟ ಎಂಬ ಶಾಸ್ತ್ರೀಯ ಹೆಸರಿನ ಒಂದು ಸಣ್ಣಗಾತ್ರದ ಮರ. ಬೆಟ್ಟಮಾವು ಪರ್ಯಾಯನಾಮ. ಗುಗ್ಗುಳಮರದ (ಕಾಮಿಫೋರ ಮುಕುಲ್ ಪ್ರಭೇದ) ಹತ್ತಿರ ಸಂಬಂಧಿ. ಬರ್ಸರೇಸೀ ಕುಟುಂಬಕ್ಕೆ ಸೇರಿದೆ.

ಭೌಗೋಳಿಕ

ಏಷ್ಯ ಮತ್ತು ಆಫ್ರಿಕಗಳ ಮೂಲ ವಾಸಿಯಾದ ಇದು ದಕ್ಷಿಣ ಭಾರತದಲ್ಲೆಲ್ಲ ಬಲುಸಾಮಾನ್ಯ. ಶೀಘ್ರವಾಗಿ ಮತ್ತು ಯಾವ ಬಗೆಯ ಆರೈಕೆಯ ಅಗತ್ಯವಿಲ್ಲದೆ ಬೆಳೆಯುವುದರಿಂದ, ಇದನ್ನು ತೋಟಗಳಲ್ಲಿ, ರಸ್ತೆಗಳ ಬದಿಗಳಲ್ಲಿ, ಬೇಲಿಗಳಲ್ಲಿ ಬೆಳೆಸುವುದಿದೆ. ಕಾಂಡತುಂಡುಗಳನ್ನು ನೆಟ್ಟು ಇದನ್ನು ಬೆಳೆಸುವುದೇ ವಾಡಿಕೆಯಲ್ಲಿರುವ ಕ್ರಮ.

ಲಕ್ಷಣಗಳು

ಮಧ್ಯಮ ಪ್ರಮಾಣದ ಮರ.ಕೆಲವು ೧೫ರಿಂದ ೨೦ ಮೀಟರ್ ಬೆಳೆದರೂ ಸಾಮಾನ್ಯವಾಗಿ ಮಧ್ಯಮ ಪ್ರಮಾಣದ ಮರ[೨]. ಕೊಂಡಮಾವಿನ ತೊಗಟೆ ಬಹಳ ನವುರಾಗಿದ್ದು ಕಾಗದವನ್ನು ಹೋಲುತ್ತದೆ. ಎಲೆ ಹಾಗೂ ಮರದ ತೊಗಟೆಗಳಿಗೆ ಮಾವಿನಹಣ್ಣಿನ ವಾಸನೆಯಿದೆ. ಎಲೆಗಳು ಸಂಯುಕ್ತ ಮಾದರಿಯವು; ಒಂದೊಂದರಲ್ಲೂ 2-5 ಜೋಡಿ ಕಿರು ಎಲೆಗಳಿವೆ. ಎಲೆಗಳ ಜೋಡಣೆ ಪರ್ಯಾಯ ಮಾದರಿಯದು. ಹೂಗಳೂ ಸಂಕೀರ್ಣ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಒಂದೊಂದು ಹೂವಿನಲ್ಲೂ ಸಾಮಾನ್ಯವಾಗಿ 4 ಪುಷ್ಪಪತ್ರಗಳು, 4 ದಳಗಳು, 8-10 ಕೇಸರಗಳು, ಉಚ್ಚಸ್ಥಾನದ ಅಂಡಾಶಯ ಇವೆ. ಅಂಡಕೋಶದಲ್ಲಿ 2-4 ಕೋಣೆಗಳಿದ್ದು ಒಂದೊಂದರಲ್ಲೂ 2 ಅಂಡಕಗಳಿವೆ. ಫಲ ಅಷ್ಟಿಫಲ ಮಾದರಿಯದು. ಗಾತ್ರ ಬಟಾಣಿ ಕಾಳಿನಷ್ಟು.

ಉಪಯೋಗಗಳು

ಇದರ ಕಾಯಿಯಿಂದ ಉಪ್ಪಿನಕಾಯಿ ಹಾಕುತ್ತಾರೆ. ಈ ಮರದಿಂದ ಗೋಂದು ಮಿಶ್ರಿತ ರೆಸಿನ್ ವಸ್ತುವನ್ನು ಪಡೆಯಬಹುದಾಗಿದ್ದು ಅದನ್ನು ಧೂಪದಂತೆ ಬಳಸುವುದುಂಟು.

ಉಲ್ಲೇಖಗಳು

  1. http://www.theplantlist.org/tpl/record/kew-2733441
  2. Ashton et al Field Guide to the Common Trees and Shrubs of Sri Lanka p. 123, `India Diversity Portal: Commiphora caudata' at http://indiabiodiversity.org/species/show/266696 & 'Bihrmann's Caudiciforms: Commiphora caudata' at http://www.bihrmann.com/caudiciforms/subs/com-cau-sub.asp, http://indiabiodiversity.org/species/show/266696
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಕೊಂಡ ಮಾವು: Brief Summary ( Kannada )

provided by wikipedia emerging languages

ಕೊಂಡ ಮಾವುಕಾಮಿಫೋರ ಕಾಡೇಟ ಎಂಬ ಶಾಸ್ತ್ರೀಯ ಹೆಸರಿನ ಒಂದು ಸಣ್ಣಗಾತ್ರದ ಮರ. ಬೆಟ್ಟಮಾವು ಪರ್ಯಾಯನಾಮ. ಗುಗ್ಗುಳಮರದ (ಕಾಮಿಫೋರ ಮುಕುಲ್ ಪ್ರಭೇದ) ಹತ್ತಿರ ಸಂಬಂಧಿ. ಬರ್ಸರೇಸೀ ಕುಟುಂಬಕ್ಕೆ ಸೇರಿದೆ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು