dcsimg
Image of pork tapeworm
Unresolved name

Eucestoda

ಲಾಡಿಹುಳು ( Kannada )

provided by wikipedia emerging languages

ಲಾಡಿಹುಳು ಪ್ಲಾಟಿಹೆಲ್ಮಿಂತೀಸ್ ವಿಭಾಗದ ಸಿಸ್ಟೋಡ ವರ್ಗದ ಸು.1500ಕ್ಕೂ ಹೆಚ್ಚು ಪ್ರಭೇದಗಳಿರುವ ಅಕಶೇರುಕ ಪರೋಪಜೀವಿ ಹುಳು (ಟೇಪ್‍ವರ್ಮ್). ವಲಯಯುಕ್ತ ಲಾಡಿಯಂಥ ಉದ್ದ ದೇಹವಿರುವ ವಯಸ್ಕಹುಳುಗಳ ಆವಾಸ ಆತಿಥೇಯ ಕಶೇರುಕಗಳ ಕರುಳು. ತಲೆಯಲ್ಲಿರುವ (ಸ್ಕೋಲೆಕ್ಸ್) ಕೊಕ್ಕೆಗಳ ಸಹಾಯದಿಂದ ಆತಿಥೇಯದ ಕರುಳುಭಿತ್ತಿಗೆ ಕಚ್ಚಿಕೊಂಡು ಹೀರುಬಟ್ಟಲುಗಳಿಂದ (ಸಕ್ಷನ್‍ಕಪ್ಸ್) ನೇರವಾಗಿ ಆಹಾರವನ್ನು ಅಪಶೋಷಿಸಬಲ್ಲವು. ಇವಕ್ಕೆ ಕರುಳು ಇಲ್ಲ. ಪ್ರತ್ಯೇಕ ಶ್ವಸನಮಂಡಲವಿಲ್ಲದಿದ್ದರೂ ಕೋಶೀಯ ಅನಿಲವಿನಿಮಯ ವಿಧಾನದ ವಾಯವಿಕ ಮತ್ತು ಅವಾಯವಿಕ ಉಸಿರಾಟ ಸಾಮರ್ಥ್ಯ ಎಲ್ಲ ಊತಕಗಳಿಗಿದೆ. ಜೀವನಚಕ್ರ ಪೂರ್ಣಗೊಳ್ಳಲು 1 ಪ್ರಾಥಮಿಕ ಹಾಗೂ 1 ಅಥವಾ ಹೆಚ್ಚು ಮಧ್ಯಂತರ ಆತಿಥೇಯ ಜೀವಿಗಳು ಆವಶ್ಯಕ.

ವಯಸ್ಕ ಹುಳುವಿನ ತಲೆಯ ಹಿಂಭಾಗದಲ್ಲಿ ಪ್ರೋಗ್ಲಾಟಿಡುಗಳು, ಅರ್ಥಾತ್ ಅಂಡಾಶಯ ಮತ್ತು ವೃಷಣಗಳಿರುವ ವಿಶಿಷ್ಟ ವಲಯಗಳು ಉತ್ಪತ್ತಿಯಾಗುತ್ತವೆ. ಆಗ ಹೊಸತು ಹಳೆಯದನ್ನು ಹಿಂದೆ ತಳ್ಳುತ್ತದೆ. ತತ್ಪರಿಣಾಮವಾಗಿ, ಪ್ರೋಗ್ಲಾಟಿಡ್ ಪಕ್ವವಾಗುವ ವೇಳೆಗೆ ಹುಳುವಿನ ಹಿಂಭಾಗಕ್ಕೆ ತಲಪಿರುವುದು. ಒಂದೇ ಪ್ರೋಗ್ಲಾಟಿಡಿನಲ್ಲಿ ಸ್ವನಿಷೇಚನೆ ಯಾಗಬಹುದು. ಒಂದೇ ಹುಳುವಿನ ಎರಡು ಪ್ರೋಗ್ಲಾಟಿಡುಗಳ ನಡುವೆ ಅಥವಾ ಎರಡು ಹುಳುಗಳ ನಡುವೆ ಅಡ್ಡನಿಷೇಚನೆಯೂ ಆಗಬಹುದು. ಸಾವಿರಾರು ನಿಷೇಚಿತ ಮೊಟ್ಟೆಗಳಿರುವ ಪಕ್ವ ಪ್ರೋಗ್ಲಾಟಿಡ್ ಹುಳುವಿನ ದೇಹದಿಂದ ಕಳಚಿಕೊಂಡು ಆತಿಥೇಯ ಜೀವಿಯ ಮಲದೊಂದಿಗೆ ಹೊರಬರುವುದು. ಪ್ರೋಗ್ಲಾಟಿಡಿನ ಭಿತ್ತಿ ವಿಘಟಿಸಿ ಮೊಟ್ಟೆಗಳು ಪರಿಸರದಲ್ಲಿ ಚದರುತ್ತವೆ. ಮೊಟ್ಟೆಯೊಳಗೆ ಭ್ರೂಣ ಸ್ವಲ್ಪ ಬೆಳೆದು ವಿಶ್ರಾಂತಸ್ಥಿತಿಯಲ್ಲಿರುತ್ತದೆ. ಆಹಾರ ಮುಖೇನ ಮಧ್ಯಂತರ ಆತಿಥೇಯ ಜೀವಿದೇಹ ಪ್ರವೇಶಿಸುವ ಮೊಟ್ಟೆಯ ಚಿಪ್ಪು ಕರಗಿ ಭ್ರೂಣ ಹೊರಬಂದು ರಕ್ತ ಅಥವಾ ದುಗ್ಧರಸ ಪರಿಚಲನವ್ಯವಸ್ಥೆಯ ಮೂಲಕ ಸ್ನಾಯು ಊತಕಗಳನ್ನು ತಲಪುತ್ತದೆ. ಅಲ್ಲಿ ಬುಡ್ಡೆಯಾಗಿ (ಸಿಸ್ಟ್) ಸುಪ್ತಾವಸ್ಥೆಯ ಲ್ಲಿರುವುದು. ಸೋಂಕು ತಗಲಿರುವ ಸ್ನಾಯುವನ್ನು ಹಸಿಯಾಗಿ ಅಥವಾ ಅರೆಬೇಯಿಸಿ ತಿನ್ನುವ ಪ್ರಾಥಮಿಕ ಆತಿಥೇಯದ ದೇಹವನ್ನು ಇದು ಪ್ರವೇಶಿಸುತ್ತದೆ. ಮೊಟ್ಟೆಯ ಚಿಪ್ಪು ಕರಗಿ ಹೊಸ ವಯಸ್ಕಹುಳುವಿನ ತಲೆ ಹೊರಬಂದು ಕರುಳುಭಿತ್ತಿಗೆ ಕಚ್ಚಿಕೊಂಡು ಬೆಳೆಯುತ್ತದೆ. ಹೀಗೆ ಜೀವನಚಕ್ರ ಉರುಳುತ್ತಿರುತ್ತದೆ.

ಟೀನಿಯ ಸೋಲಿಯಮ್, ಟೀನಿಯ ಸ್ಯಾಜಿನೇಟ, ಸುಡೊಫಿಲ್ಲೀಡಿಯನ್, ಡೈಫಿಲೊಬಾತ್ರಿಯಮ್ ಪ್ರಭೇದಗಳು, ಹೈಮಿನೊಲೆಪಿಸ್ ಪ್ರಭೇದಗಳು ಮುಂತಾದ ಸಿಸ್ಟೋಡ ರೋಗಕಾಟಗಳಿಗೆ ಮಾನವ ಪ್ರಾಥಮಿಕ ಆತಿಥೇಯ. ನಾಯಿ, ಬೆಕ್ಕು, ಮತ್ತು ವಿರಳವಾಗಿ ಮಾನವ ಡೈಪಿಲಿಡಿಯಮ್ ಕ್ಯಾನಿನಮ್ ಪ್ರಭೇದದ ಪ್ರಾಥಮಿಕ ಆತಿಥೇಯಗಳು, ಚಿಗಟ ಅಥವಾ ಹೇನು ಮಧ್ಯಂತರ ಆತಿಥೇಯ. ಎಕೈನೊಕಾಕೋಸಸ್, ಟೀನಿಯ ಮಲ್ಟಿಸೆಪ್ಸ್ ಮುಂತಾದವುಗಳಿಗೆ ಮಾನವ ಮಧ್ಯಂತರ ಆತಿಥೇಯ. ಲಾರ್ವಗಳು ಈ ಆತಿಥೇಯನ ವಿಭಿನ್ನ ಅಂಗವ್ಯವಸ್ಥೆಗಳ ಮೂಲಕ ಪಯಣಿಸಿ ಊತಕಗಳಲ್ಲಿ ನೆಲಸುತ್ತವೆ. ಹೈಮಿನೊಲೆಪಿಸ್ ಪ್ರಭೇದಗಳಿಗೆ ಮತ್ತು ಟೀನಿಯ ಸೋಲಿಯಮಿಗೆ ಮಾತ್ರ ಮಾನವ ಪ್ರಾಥಮಿಕ ಮತ್ತು ಮಧ್ಯಂತರ ಆತಿಥೇಯನಾಗಬಹುದು. ಬಹುತೇಕ ರೋಗಕಾಟಗಳು (ಇನ್‍ಫೆಸ್ಟೇಶನ್ಸ್) ಬಾಹ್ಯ ರೋಗಲಕ್ಷಣರಹಿತವಾಗಿರುತ್ತವೆ. ಇದ್ದರೂ ಅವು ಸಾಮಾನ್ಯ ಉದರಬೇನೆ, ತೂಕನಷ್ಟ, ಕ್ಷುಧಾನಾಶ (ಅನೊರೆಕ್ಸಿಯ) ಮುಂತಾದವು. ಅನಫಿಲ್ಯಾಕ್ಸಿಸ್, ಉರಿಯೂತಾನುಕ್ರಿಯೆಗಳು, ಪೋಷಕಾಂಶ ನ್ಯೂನತೆಗಳು, ಪ್ರಧಾನಾಂಗಗಳ ಮೇಲೆ ಭಾರ ಹೇರಿದ ಅನುಭವ ಮುಂತಾದವು ತೀವ್ರ ರೋಗಕಾಟದ ಲಕ್ಷಣಗಳು.

ಮಾನವನನ್ನು ಹೆಚ್ಚು ಕಾಡುವ ಲಾಡಿಹುಳುಗಳು:

1. ಟೀನಿಯ ಸ್ಯಾಜಿನೇಟ. ಇದಕ್ಕೆ 9 ಮೀ. ಉದ್ದ ಬೆಳೆಯುವ, 2000 ಪ್ರೋಗ್ಲಾಟಿಡುಗ ಳನ್ನು ಉತ್ಪತ್ತಿ ಮಾಡುವ ಸಾಮಥ್ರ್ಯ ಇದೆ. ದನ ಇದರ ಮಧ್ಯಂತರ ಆತಿಥೇಯ. ಮಲದಲ್ಲಿ ಹುಳುಗಳ ಚೂರುಗಳು ಇರುವುದೇ ಮುಖ್ಯ ಲಕ್ಷಣ. ಕರುಳು ಬಾಲ, ಪಿತ್ತ ಮತ್ತು ಮೇದೋಜೀರಕ ನಾಳಗಳಲ್ಲಿ ತಡೆ ಇರುವ ಲಕ್ಷಣ, ಅಧಿಜಠರ ಬೇನೆ (ಎಪಿಗ್ಯಾಸ್ಟ್ರಿಕ್ ಪೇಯ್ನ್), ಅತಿಸಾರ, ತೂಕನಷ್ಟ ಕಾಣಿಸಿಕೊಳ್ಳಬಹುದು.

2. ಟೀನಿಯ ಸೋಲಿಯ ಮ್. ಹಂದಿ ಇದರ ಮಧ್ಯಂತರ ಆತಿಥೇಯ. ಸಾಮಾನ್ಯವಾಗಿ ರೋಗ ಕಾಟಕ್ಕೆ ಬಾಹ್ಯಲಕ್ಷಣಗಳಿರುವುದಿಲ್ಲ. ಕೆಲವರಲ್ಲಿ ಕರುಳು ಬಾಲ, ಪಿತ್ತ ಮತ್ತು ಮೇದೋಜೀರಕ ನಾಳಗಳಲ್ಲಿ ತಡೆ ಇರುವ ಲಕ್ಷಣ, ಅಧಿಜಠರ ಅಸ್ವಸ್ಥತೆ, ಅತಿ ಹಸಿವು, ತೂಕನಷ್ಟ, ಓಕರಿಕೆ ಕಾಣಿಸಿಕೊಳ್ಳಬಹುದು.

3. ಡೈಬಾತ್ರಿಯೊಸಿಫ್ಯಾಲಸ್ ಲೇಟಸ್. ಇದಕ್ಕೆ 18 ಮೀ ಉದ್ದ ಬೆಳೆಯುವ, 4000 ಪ್ರೋಗ್ಲಾಟಿಡುಗಳನ್ನು ಉತ್ಪತ್ತಿ ಮಾಡುವ ಸಾಮಥ್ರ್ಯ ಇದೆ. ಕೆಲವು ವಲ್ಕವಂತಗಳು, ಮೀನುಗಳು ಮಧ್ಯಂತರ ಆತಿಥೇಯಗಳು. ಕರುಳು ಅಸ್ವಸ್ಥತೆ, ಅತಿಸಾರ, ವಾಂತಿ, ದುರ್ಬಲತೆ, ತೂಕನಷ್ಟ ಸಾಮಾನ್ಯ ಲಕ್ಷಣಗಳು. ಹಾನಿಕರ ರಕ್ತಹೀನತೆಯನ್ನು (ಪರ್ನಿಷಸ್ ಅನೀಮಿಯ) ಹೋಲುವ ನರಸಂಬಂಧೀ ಅಸ್ವಸ್ಥತೆಗಳು (ಉದಾ: ದೇಹ ಸಮತೋಲ ಕಾಯ್ದುಕೊಳ್ಳಲಾಗದಿರುವುದು, ಮನೋವೈಕಲ್ಯ, ಅರೆಲಕ್ವ) ತೀವ್ರ ರೋಗಕಾಟದ ಲಕ್ಷಣಗಳು.

4. ಎಕೈನೊಕಾಕಸ್ ಗ್ರ್ಯಾನು ಲೋಸಸ್. ನಾಯಿ ಪ್ರಾಥಮಿಕ ಆತಿಥೇಯ. ಅನೇಕ ಪ್ರಾಣಿ ಗಳನ್ನು ಮಧ್ಯಂತರ ಆತಿಥೇಯ ಗಳಾಗಿಸುವ ಸಾಮಥ್ರ್ಯವಿರುವ ಈ ಹುಳು, ವಿಶೇಷತಃ ಸಾಕುನಾಯಿಯಿಂದ ಮನುಷ್ಯದೇಹ ಪ್ರವೇಶಿಸಬಹುದು. ಲಾರ್ವಗಳು ದ್ರವಭರಿತಬುಡ್ಡೆಗಳಾಗುತ್ತವೆ (ಹೈಡೇಟಿಡ್ ಸಿಸ್ಟ್). ಬಳಿಕ 5-20 ವರ್ಷಗಳ ಅವಧಿಯಲ್ಲಿ ನಿಧಾನವಾಗಿ ವ್ಯಾಕೋಚಿಸುತ್ತವೆ. ವ್ಯಾಕೋಚಿತ ಬುಡ್ಡೆ ಅತಿಮುಖ್ಯ ಅಂಗಗಳ ಪೈಕಿ ಒಂದರ ಮೇಲೆ (ಸಾಮಾನ್ಯವಾಗಿ ಯಕೃತ್ತಿನ ಮೇಲೆ) ಒತ್ತಡ ಹಾಕಿ ತೀವ್ರವೇದನೆ ಅಥವಾ ಸಾವಿಗೆ ಕಾರಣವಾಗಬಹುದು. ಎಂದೇ, ಬಲು ಅಪಾಯಕಾರಿ. ತೀವ್ರ ಉದರಬೇನೆ, ಗಾಲ್ ಕಲ್ಲು (ಕೋಲೆಲಿತಿಯಾಸಿಸ್) ಅಥವಾ ಕಾಮಾಲೆ ಅನುಕರಣೆ ಯಕೃತ್ತಿನ ಬಾಧೆಯ ಲಕ್ಷಣಗಳು. ಜ್ವರ, ತುರಿಕೆ (ಪ್ಯೂರಿಟಸ್), ಇಯೊಸಿನೊಫಲಿಯ, ಸಂಭವನೀಯ ಮಾರಕ ಅನಫಿಲ್ಯಾಕ್ಸಿಸ್ ಬುಡ್ಡೆ ಒಡೆದದ್ದರ ಅಥವಾ ಸೋರಿದ್ದರ ಲಕ್ಷಣಗಳು. ಕೆಮ್ಮು, ಎದೆನೋವು, ಹೀಮಾಪ್ಟೈಸಿಸ್ ಶ್ವಾಸಕೋಶ ಸಂಬಂಧೀ ಬುಡ್ಡೆ ಒಡೆತದ ಲಕ್ಷಣಗಳು.

ರೋಗಕಾಟದ ಆರಂಭಿಕ ಹಂತದಲ್ಲಿ ಯುಕ್ತ ಚಿಕಿತ್ಸೆ ನೀಡಬೇಕಾದದ್ದು ಅನಿವಾರ್ಯ.

ಉಲ್ಲೇಖಗಳು

  • Bale, James F. "Cysticercosis." Current Treatment Options in Neurology. 2000. pp. 355–360.
  • Dunn, J., and Philip E. S. Palmer. "Sparganosis." Seminars in Roentgenology. 1998. pp. 86–88.
  • Esteban, J. G., Munoz-Antoli, C., and R. Toledo. "Human Infection by a "Fish Tapeworm," Diphyllobothrium latum, in a Non-Endemic Country." Infection. 2014. pp. 191–194.
  • Kim, Bong Jin, et al. "Heavy Hymenoleptis nana Infection Possibly Through Organic Food: Report of a Case." The Korean Journal of Parasitology. 2014. pp. 85–87.
  • Mehlhorn, Heinz. "Eucestoda Classification." Encyclopedia of Parasitology. 2008. pp. 495–497.
  • Rohde, Klaus. "Eucestoda." AccessScience. McGraw-Hill Ryerson.
  • Usharani, A., et al. "Case Reports of Hydatid Disease." Journal of Epidemiology and Global Health. 2013. p. 63–66.
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಲಾಡಿಹುಳು: Brief Summary ( Kannada )