ಸಿಂಹಗಳಲ್ಲಿ ಆಫ್ರಿಕಾದ ಸಿಂಹ ಮತ್ತು ಭಾರತೀಯ ಸಿಂಹ ಎಂಬ ಎರಡು ಮುಖ್ಯ ಪ್ರಭೇದಗಳಿವೆ. ಭಾರತೀಯ ಸಿಂಹ ವಾಸವಾಗಿರುವುದು ಗುಜರಾತ್‍ನ ಗಿರ್ ಅರಣ್ಯದಲ್ಲಿ. ಬಾರತದಲ್ಲಿರುವ ಐದು ದೊಡ್ಡ ಬೆಕ್ಕಿನ ಜಾತಿಯ ಪ್ರಾಣಿಗಳಲ್ಲಿ ಒಂದು ಭಾರತೀಯ ಸಿಂಹ. ಉಳಿದವುಗಳು ಬಂಗಾಳದ ಹುಲಿ, ಭಾರತೀಯ ಚಿರತೆ, ಹಿಮ ಚಿರತೆ ಮತ್ತು ಮಂಜು ಚಿರತೆ.
ಭಾರತೀಯ ಸಿಂಹ ಗಾತ್ರದಲ್ಲಿ ಆಫ್ರಿಕಾದ ಸಿಂಹಕ್ಕಿಂತ ತುಸು ಚಿಕ್ಕದು. ಪೂರ್ಣ ಬೆಳೆದ ಭಾರತೀಯ ಸಿಂಹ ಸುಮಾರು ೧೬೦ ರಿಂದ ೧೯೦ ಕಿಲೋ ತೂಗುತ್ತದೆ. ಇದು ಸುಮಾರು ೩.೫ ಅಡಿ ಎತ್ತರ ಮತ್ತು ೯ ಅಡಿ ಉದ್ದಕ್ಕೆ ಬೆಳೆಯುತ್ತದೆ. ಹೆಣ್ಣು ಸಿಂಹ ೧೧೦ರಿಂದ ೧೨೦ ಕಿಲೋ ಭಾರವಾಗಿರುತ್ತದೆ.
ಭಾರತೀಯ ಸಿಂಹ ಕುಟುಂಬ ಜೀವಿ. ಒಂದು ಕುಟುಂಬದಲ್ಲಿ ಒಂದು ಗಂಡು, ಒಂದು ಅಥವಾ ಎರಡು ಹೆಣ್ಣು ಮತ್ತು ಮರಿಗಳು ಇರುತ್ತವೆ.
ಹಿಂದಿನ ಕಾಲದಲ್ಲಿ ಭಾರತೀಯ ಸಿಂಹ ಭಾರತೀಯ ಭೂಖಂಡದಲ್ಲಿ ಮಾತ್ರವಲ್ಲದೆ ಪರ್ಶಿಯಾ (ಇಂದಿನ ಇರಾನ್), ಇರಾಕ್, ಸಿರಿಯಾ ಮತ್ತು ಟರ್ಕಿ ದೇಶಗಳಲ್ಲೂ ತಿರುಗಾಡುತ್ತಿತ್ತು. ಬೇಟೆಗಾರರ ಕಾರಣ ಭಾರತದಲ್ಲೂ ಸಿಂಹಗಳು ಕಾಣೆಯಾಗಿದ್ದವು.
೧೯೦೪ ರಿಂದ ೧೯೧೧ ನಡುವೆ ಗಿರ್ ಅರಣ್ಯದಲ್ಲಿ ಉಳಿದುಕೊಂಡಿದ್ದ ಕೆಲವೇ ಸಿಂಹಗಳಿಗೆ ಜುನಾಗಢದ ನವಾಬ ರಕ್ಷಣೆ ನೀಡಿದ್ದ. ಆ ಬಳಿಕ ಬ್ರಿಟಿಷರು ಇಲ್ಲಿ ಸಿಂಹಗಳ ಬೇಟೆ ನಡೆಯದಂತೆ ನೋಡಿಕೊಂಡಿದ್ದರು. ಹೀಗಾಗಿ ಇಲ್ಲಿ ಭಾರತೀಯ ಸಿಂಹಗಳ ಕೊನೆಯ ಸಂತಾನ ಉಳಿದುಕೊಂಡಿದೆ. ಇಂದು ಪಶ್ಚಿಮ ಗುಜರಾತಿನ ಜುನಾಗಢ ಮತ್ತು ಅಮೇಲಿ ಜಿಲ್ಲೆಗಳಲ್ಲಿ ಸುಮಾರು ೧೮೨೬ ಚದರ ಕಿಲೋಮೀಟರ್ ವಿಸ್ತೀರ್ಣದ ಗಿರ್ ಅಭಯಾರಣ್ಯ ಮತ್ತು ಅದರ ಸಮೀಪದ ಕಾಡುಗಳಲ್ಲಿ ಭಾರತೀಯ ಸಿಂಹಗಳು ವಾಸವಾಗಿವೆ. ಇಲ್ಲಿ ಸುಮಾರು ೫೨೩ ಸಿಂಹಗಳು ಇವೆ ಎಂದು ೨೦೧೫ರಲ್ಲಿ ಲೆಕ್ಕ ಹಾಕಲಾಗಿತ್ತು.